ePustaka – ink & weave… Get your books Self Published & Digitally Distributed

ನಾನೊಬ್ಬ ಲೇಖಕ‍/ಪ್ರಕಾಶಕ… ನಾನು ಈ ಟೆಕ್‌ಫಿಜ಼್ ನಿಂದ ಇ-ಪುಸ್ತಕ ರೂಪಿಸುವುದು ಹೇಗೆ?

‍ ಟೆಕ್‌ಫಿಜ಼್ – ಇ-ಪುಸ್ತಕ ಸೇವೆ – ನೀವು ಪ್ರಕಟಿಸಿರುವ ಅಥವಾ ಹೊಸದಾಗಿ ಹೊರತರುತ್ತಿರುವ ಪುಸ್ತಕಗಳಿಗೆ – ಇ-ಪುಸ್ತಕ ರೂಪ ಕೊಡಲು ಸಹಕರಿಸುತ್ತದೆ. ಈ…

ಟೆಕ್‌ಫಿಜ಼್ – ಇ-ಪುಸ್ತಕ ಸೇವೆ – ನೀವು ಪ್ರಕಟಿಸಿರುವ ಅಥವಾ ಹೊಸದಾಗಿ ಹೊರತರುತ್ತಿರುವ ಪುಸ್ತಕಗಳಿಗೆ – ಇ-ಪುಸ್ತಕ ರೂಪ ಕೊಡಲು ಸಹಕರಿಸುತ್ತದೆ. ಈ ಇ-ಪುಸ್ತಕಗಳಾನ್ನು ನೀವು ಯಾವುದೇ ಇ-ಪುಸ್ತಕ ವಿತರಣಾ ಸಂಸ್ಥೆಯೊಂದಿಗೆ ಸೇರಿಕೊಂಡು ಮಾರಬಹುದು.

ಟೆಕ್‌ಫಿಜ಼್ ಇ-ಪುಸ್ತಕ ಸೇವೆಯನ್ನು ಬಳಸುವುದು ಹೇಗೆ?

ನಿಮ್ಮ ಹೊಸ ಇ-ಪುಸ್ತಕವನ್ನು ರೂಪಿಸುವುದು ಬಹಳ ಸುಲಭದ ಕೆಲಸ. ಟೆಕ್‌ಫಿಝ್ ತಾನು ಒದಗಿಸುವ ಪ್ರತಿ ಪುಸ್ತಕ ಪಾರ್ಮಾಟ್‌ಗೆ ನಿಗದಿತ ದರ ಪಟ್ಟಿ ಹೊಂದಿದೆ. ನಿಮ್ಮ ಪುಸ್ತಕದಲ್ಲಿನ ಪದಗಳನ್ನು ಅವಲಂಬಿಸಿ, ಅದನ್ನು ಇ-ಪುಸ್ತಕವನ್ನಾಗಿಸಲು ದರವನ್ನು ಮೊದಲೇ ತಿಳಿಸಲಾಗುತ್ತದೆ. ನೀವು ಅದನ್ನು ಒಪ್ಪುತ್ತಿದ್ದಂತೆಯೇ, ನಿಮಗೆ ಬಿಲ್ ಹಾಗೂ ಆನ್-ಲೈನ್ ಪೇಮೆಂಟ್ ಬೇಡಿಕೆಯನ್ನು ಇ-ಮೇಲ್ ಮೂಲಕ ಕಳಿಸಲಾಗುತ್ತದೆ. ಇ-ಪುಸ್ತಕದ ಖರ್ಚನ್ನು ಮುಂಗಡವಾಗಿ ನೀವು ಭರಿಸಬೇಕಾಗುತ್ತದೆ. ಈ ಮೊತ್ತವನ್ನು ಸಲ್ಲಿಸುತ್ತಲೇ, ನಿಮ್ಮ ಮುಂದಿನ ಪ್ರಕ್ರಿಯೆ ಆರಂಭವಾಗುತ್ತದೆ.


ನೀವು ರೂಪಿಸಲು ಉದ್ದೇಶಿಸಿರುವ ಪ್ರತಿಯೊಂದು ಇ-ಪುಸ್ತಕಕ್ಕೆ, ನಾವು ನಿಮ್ಮಿಂದ ಪುಸ್ತಕದ ಹೆಸರು, ಮುಖಪುಟ ವಿನ್ಯಾಸ ಇತ್ಯಾದಿಗಳನ್ನು ಸ್ವೀಕರಿಸುತ್ತೇವೆ. ಅವು ನಮಗೆ ಸಿಕ್ಕಿದಾಗ, ಆ ಪುಸ್ತಕ‍‌ವನ್ನು ಸಂಪಾದಿಸುವ ‍ಕೊಂಡಿಯನ್ನು ನಿಮಗೆ ನೀಡಲಾಗುತ್ತ‍ದೆ. ಮುಂದಿನ ಪ್ರಕ್ರಿಯೆಯನ್ನು, ನೀವೇ, ನಿಮ್ಮ ಅನುಕೂಲದಲ್ಲಿ ಸರಳವಾಗಿ ಮಾಡಬಹುದಾಗಿರುತ್ತದೆ. ಪುಸ್ತಕದ ಪಠ್ಯವನ್ನು ಯೂನಿಕೋಡ್ ನಲ್ಲಿ ಸಿದ್ಧ ಮಾಡಿಕೊಂಡು, ಅದನ್ನು ನೇರವಾಗಿ ನಮ್ಮ ಜಾಲತಾಣದಲ್ಲಿ ಅಪ್ಲೋಡ್ ಮಾಡಬಹುದಾಗಿರುತ್ತದೆ. ಅದಕ್ಕೆ ನಾವು ಹಿನ್ನೆಲೆಯಲ್ಲಿ ಒಂದು ತಂತ್ರಾಂಶವನ್ನು ಸಿದ್ಧ ಪಡಿಸಿಕೊಂಡಿದ್ದೇವೆ. ನೀವು ಅಪ್-ಲೋಡ್ ಮಾಡಿದ ನಂತರ, ನಿಮ್ಮ ಅಗತ್ಯಕ್ಕೆ ತಕ್ಕಂತೆ, epub, mobi, ‌print-ready-pdf ರೂಪಗಳಲ್ಲಿ ಇ-ಪುಸ್ತಕ ಕಡತಗಳನ್ನು ನೀವು ಪಡೆಯಬಹುದು. ಈ ಎಲ್ಲಾ ಪ್ರಕ್ರಿಯೆಯೂ ಅಂತರ್ಜಾಲದ ಮೂಲಕವೇ, ಕೆಲವೇ ಸರಳ ಹಂತಗಳಲ್ಲಿ ನಡೆಯುತ್ತದೆ.


ಒಮ್ಮೆ ರೂಪುಗೊಂಡ ಇ-ಪುಸ್ತಕವನ್ನು ಮೂವತ್ತು ದಿನಗಳೊಳಗೆ – ಮೂರು ಬಾರಿ ಬದಲಿಸಿ ಹೊಸ ಪ್ರತಿಗಳನ್ನು ಪಡೆಯುವ ಅವಕಾಶ ನಿಮಗೆ ಇರುತ್ತದೆ.
ಹೊಸ ಆವೃತ್ತಿಗಳ ನಿರ್ಮಾಣ, ಪುಸ್ತಕದಲ್ಲಿನ ಮಾಹಿತಿಯ ಪರಿಷ್ಕರಣ ಅಗತ್ಯವಿದ್ದಲ್ಲಿ, ಈ ಕೆಲಸಗಳನ್ನು ದೀರ್ಘ ಕಾಲ ನೀವು ಮಾಡಲಿದ್ದೀರಿ ಎಂದಾದಲ್ಲಿ, ಅಂಥಾ ಪುಸ್ತಕಗಳಿಗೆ, ವಾರ್ಷಿಕ ರಿಟೈನರ್ ಹಣ ನೀಡಿ, ಹಲವು ಬಾರಿ ಪರಿಷ್ಕೃತ ಇ-ಪುಸ್ತಕಗಳನ್ನು ಪಡೆಯುವ ಸೇವೆಯೂ ನಮ್ಮಲ್ಲಿರುತ್ತದೆ. ಇದು ಲೇಖಕ/ಪ್ರಕಾಶಕರಾದ ನಿಮಗೆ ಪು‍ಸ್ತಕ ಸಂಪಾದನೆಯ ಗೋಜಲನ್ನು ಕಡಿಮೆ ಮಾಡಲಿದೆ.

0 Comments

Submit a Comment

Your email address will not be published. Required fields are marked *