ಅದರ ಪ್ರಕಟಣೆಯ ಕುರಿತಾಗಿ ಯೋಚಿಸುತ್ತಿದ್ದೀರಾ?
ಪುಸ್ತಕ ಪ್ರಿಯರೇ, ನೀವೂ ಪುಸ್ತಕ ಬರೆದಿದ್ದೀರಾ? ಅದರ ಪ್ರಕಟಣೆಯ ಕುರಿತಾಗಿ ಯೋಚಿಸುತ್ತಿದ್ದೀರಾ?
- ನೀವೇಕೆ ನಿಮ್ಮ ಪುಸ್ತಕವನ್ನು ಇ-ಪುಸ್ತಕವನ್ನಾಗಿ ಪ್ರಕಟಿಸಬಾರದು?
- ಇ-ಪುಸ್ತಕವನ್ನು ‘ಪ್ರಿಂಟ್ ಆನ್ ಡಿಮ್ಯಾಂಡ್’ ಮೂಲಕ ನಿಮ್ಮ ಓದುಗ ಬಳಗಕ್ಕೆ ಸುಲಭವಾಗಿ ತಲುಪಿಸಬಹುದು.
- ನೀವೇ ಪ್ರಕಟಿಸಬಹುದು. ಇದರಿಂದ ಪ್ರಕಾಶಕರನ್ನು ಹಿಂಬಾಲಿಸುವ, ಅವರ ಕರಾರುಗಳಿಂದ ಸುಸ್ತಾಗುವ ಅಗತ್ಯವಿಲ್ಲ!
- ನಿಮ್ಮ ಇಷ್ಟದ ಇ-ಪುಸ್ತಕ ಮಾರಾಟ ವೇದಿಕೆಯಲ್ಲಿ ಮಾರಾಟ ಮಾಡುವುದು ಕೂಡ ಸಾಧ್ಯ.
- ಪುಸ್ತಕದ ಪ್ರಚಾರ, ವಿತರಣೆ, ಸರಳ, ಅದಕ್ಕೆ ಪ್ರತ್ಯೇಕ ಆರ್ಥಿಕ ಭಾರ ಇರುವುದಿಲ್ಲ.
- ಒಮ್ಮೆ ರೂಪಿಸಿದ ಇ-ಪುಸ್ತಕವನ್ನು ಮತ್ತೆ ಮತ್ತೆ ಮುದ್ರಿಸುವ ಖರ್ಚು ಇರುವುದಿಲ್ಲ. ಎಷ್ಟು ಕಾಲ ಬೇಕಿದ್ದರೂ, ನಿಮ್ಮ ಇ-ಪುಸ್ತಕವನ್ನು ಪ್ರಸಾರ ಮಾಡುತ್ತಲೇ ಇರಬಹುದು.
- ಪುಸ್ತಕ ಮಾರಾಟದಿಂದ ಬರುವ ಸಂಪೂರ್ಣ ಹಣ ನಿಮ್ಮಲ್ಲೇ ಉಳಿಯುತ್ತದೆ.
ಇದರ ತಾಂತ್ರಿಕತೆಯ ಬಗ್ಗೆ ಚಿಂತೆಯೇ?
- ನಿಮ್ಮ ಸಹಾಯಕ್ಕೆ ನಾವಿದ್ದೇವೆ!
- ತಂತ್ರಜ್ಞಾನದ ಜಂಜಾಟವನ್ನು ನಾವು ಬಗೆಹರಿಸಲಿದ್ದೇವೆ.
- ಡಿ.ಟಿ.ಪಿ ಗೆ ಮಾಡುತ್ತಿದ್ದ ಖರ್ಚನ್ನು ಇ-ಪುಸ್ತಕ, ಪ್ರಿಂಟ್ ರೆಡಿ ಮಾದರಿಗೆ ಖರ್ಚು ಮಾಡಿ, ನಿಮ್ಮ ಸೋಷಿಯಲ್ ಮೀಡಿಯಾ ಮೂಲಕ ಪುಸ್ತಕ ಓದುಗರನ್ನು ತಲುಪಿ.
- ಇ-ಪುಸ್ತಕ ವೇದಿಕೆಗಳಾದ – ಗೂಗಲ್ ಪ್ಲೇ ಬುಕ್ಸ್, ಆಪಲ್ ಐ-ಬುಕ್ಸ್, ಕಿಂಡಲ್, ಕನ್ನಡದ್ದೇ ಇ-ಪುಸ್ತಕ ವೇದಿಕೆಗಳಿಗೂ ನೀವೇ ನೇರವಾಗಿ ಸಿದ್ಧವಾದ ಇ-ಪುಸ್ತಕ ಒದಗಿಸಬಹುದು. ಎಲ್ಲ ವೇದಿಕೆಗಳಲ್ಲಿ, ನೀವು ಪುಸ್ತಕಗಳನ್ನು ನೇರವಾಗಿ ಮಾರಬಹುದಾಗಿರುತ್ತದೆ.
0 Comments