ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯುಲಾಂಗ್ಚ)
Additional information
Ebook Available On: | https://play.google.com/store/books/details/Ravi_Hanj______________?id=UCz6DwAAQBAJ |
---|---|
Author | Ravi Hanj |
Publisher | Ravi Hanj |
ಯಾವುದೇ ಸಿದ್ಧ ಮಾದರಿಯ ಸಾಹಿತ್ಯ ಪ್ರಕಾರಗಳಿಗೆ ನಿಲುಕದೆ ತನ್ನದೇ ವೈಶಿಷ್ಟ್ಯವನ್ನು ಹೊಂದಿರುವ ಮಾನವಿಕ ಕೃತಿ, ಅಗಣಿತ ಅಲೆಮಾರಿ ಯಾನೆ ವೂಶಿಯನ್ ಡಿ ಲ್ಯುಲಾಂಗ್ಚ. ಕಾದಂಬರಿಯೆಂದರೆ ಕಾದಂಬರಿ, ಪ್ರವಾಸ ಕಥನವೆಂದರೆ ಪ್ರವಾಸ ಕಥನ, ಆಡಳಿತ ವ್ಯವಸ್ಥೆಗಳ ವಿಶ್ಲೇಷಣಾ ಗ್ರಂಥವೆಂದರೆ ವಿಶ್ಲೇಷಣಾ ಗ್ರಂಥ, ಇತಿಹಾಸ-ವರ್ತಮಾನದ ಕಲಾಜು ಎಂದರೆ ಕಲಾಜು, ಸೃಜನಶೀಲವೆಂದರೆ ಸೃಜನಶೀಲ, ಸೃಜನೇತರವೆಂದರೆ ಸೃಜನೇತರ! ಅಥವಾ ಮೂಗೆಳೆಯಲು ಎನ್ನಾರೈಗಳ ವಿಲಾಸವೆಂದರೆ ವಿಲಾಸ, ಕಲಾಯಿಯೆಂದರೆ ಕಲಾಯಿ, ಖಯಾಲಿಯೆಂದರೆ ಖಯಾಲಿ, ಶೋಕಿಯೆಂದರೆ ಶೋಕಿ, ಜೋಕೆಯೆಂದರೆ ಜೋಕೆ! ತರಾಜು ನಿಮ್ಮದೆ! ಇದು ಕೇವಲ ಸತ್ಯ ಮತ್ತು ವಾಸ್ತವಿಕ ಸತ್ಯಗಳನ್ನು ಮಾತ್ರ ಹೊಂದಿರುವ ಮಾನವಿಕ ಪುಸ್ತಿಕೆ. ಸತ್ಯ ಕಟುವೆಂಬುದು ಎಷ್ಟು ಸತ್ಯವೋ, ಸತ್ಯಂ ಶಿವಂ ಸುಂದರಂ ಸಹ ಅಷ್ಟೇ ಸತ್ಯ!
ಚೀನೀ ಯಾತ್ರಿಕ ಹುಯೆನ್ ತ್ಸಾಂಗ್ ಸಾಗಿಬಂದಿದ್ದ ಹಾದಿಯಲ್ಲಿ ಭಿನ್ನ ಸಾಮಾಜಿಕ ಹಿನ್ನೆಲೆಯ ಮೂವರು ಮಿತ್ರರು (ಒಬ್ಬ ಚೀನೀ, ಭಾರತೀಯ ಮತ್ತು ಒಬ್ಬ ಅಮೆರಿಕನ್) ಪ್ರವಾಸ ಕೈಗೊಂಡು ಚೈನಾ-ಭಾರತ, ಇತಿಹಾಸ-ವರ್ತಮಾನ, ಕಮ್ಯುನಿಸ್ಟ್-ಪ್ರಜಾಪ್ರಭುತ್ವ, ಮತ್ತು ಜನಾಶಯ-ನಿರಾಶಯಗಳನ್ನು ವಿಶ್ಲೇಷಣೆಗೊಳಪಡಿಸಿ ಅನಾವರಣಗೊಳಿಸುವುದರೊಂದಿಗೆ ಪ್ರವಾಸದ ರಸಾಸ್ವಾದಗಳ ಅನುಭವವನ್ನೂ ಮೇಳೈಸಿಕೊಂಡು ಸಮ್ಮಿಳಿತಗೊಂಡಿರುವ ಕೃತಿ, ವೂಶಿಯನ್ ಡಿ ಲ್ಯುಲಾಂಗ್ಚ, ಯಾನೆ ಅಗಣಿತ ಅಲೆಮಾರಿ ಉರ್ಫ್ The Infinite Wanderer!
ಚೈನಾದ ಕಮ್ಯುನಿಸ್ಟ್ ಸರ್ಕಾರ ಹೇಗೆ ತನ್ನ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಬಂಡವಾಳಶಾಹಿಯಾಗಿದೆ ಮತ್ತು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕುಗಳು ಮೂಲಭೂತವಾಗಿಯೇ ಹೇಗೆ ಅನುಷ್ಠಾನದಲ್ಲಿ ಚ್ಯುತಿಗೊಂಡು ಅಸಂವಿಧಾನಿಕವಾಗಿವೆ ಎಂದು ವಾಸ್ತವ ಘಟನೆಗಳ ಮೂಲಕ ತೆರೆದಿಡುತ್ತ ಚಿಂತನೆಗೆ ಹಚ್ಚುವ ಕೃತಿ ಇದಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಚೈನಾದ ಅಭಾಸಗಳನ್ನು, ಭಾರತದ ವಿಪರ್ಯಾಸಗಳನ್ನು ಆಯಾಯ ದೇಶಗಳ ಸೈದ್ಧಾಂತಿಕ ಆಡಳಿತ ವ್ಯವಸ್ಥೆಯ ಪರಿಮಿತಿಯಲ್ಲೇ ತೆರೆದಿಡುವ ಕನ್ನಡದ ಏಕೈಕ ಕೃತಿ, ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯೂಲಾಂಗ್ಚ)!
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
Reviews
There are no reviews yet.