ತಂತ್ರಾಗ್ನಿ: (ಕಾದಂಬರಿ)
Additional information
Ebook Available On: | https://play.google.com/store/books/details/_________?id=mMr-DwAAQBAJ |
---|---|
Author | ಗಣೇಶ್ ಪ್ರಸಾದ್ |
Publisher | Ganesh Prasad Nayak |
ತಂತ್ರಾಗ್ನಿಯ ಮೊದಲ ಕಿಡಿ ಹಲವು ವರ್ಷಗಳ ಹಿಂದೆ ಒಂದು ಹುಡುಕಾಟದ ಹುಮ್ಮಸ್ಸಿನ ರೂಪದಲ್ಲಿ ಹುಟ್ಟಿತ್ತಾದರೂ ಅದೊಂದು ಕಾದಂಬರಿಯ ರೂಪಪಡೆದದ್ದು ಅನಿರೀಕ್ಷಿತವೇ. ಭಾರತದ ಪ್ರಾಚೀನ ಸಂಸ್ಕೃತಿಯ ಅಗಾಧ ಜ್ಞಾನ ಭಂಡಾರದಲ್ಲಿ ಹಲವು ನಿಗೂಢ ವಿಚಾರಗಳಿವೆ. ಇವು ನನ್ನನ್ನು ಸದಾ ಸೆಳೆದಿವೆ. ವಿಜ್ಞಾನವು ಎಷ್ಟೇ ಮುಂದುವರೆದಿದ್ದರೂ ಈ ವಿಚಾರಗಳ ಬಗೆಗಿನ ಆಸ್ಥೆ ಜನ ಸಮುದಾಯದ ಮನಸ್ಸಿನಿಂದ ದೂರವಾಗಲಾರದು ಎಂಬುದು ಸತ್ಯ. ಆಳವಾಗಿ ಬೇರೂರಿದ ನಂಬಿಕೆಗಳನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇವುಗಳ ಅಸ್ತಿತ್ವವನ್ನು ಒಪ್ಪಿ ಪುರಸ್ಕರಿಸುವವರು ಇರುವಂತೆ ಅಲ್ಲಗಳೆಯುವವರೂ ಇದ್ದಾರೆ. ಅದು ಅವರವರ ಸ್ವಾತಂತ್ರ್ಯ. ಇದರ ಬಗೆಗಿನ ಪರ ವಿರೋಧ ಚರ್ಚೆ ಕಾದಂಬರಿಯ ಉದ್ದೇಶವಲ್ಲ. ರೋಚಕತೆಗೆ ಒತ್ತು ನೀಡುವ ಕಥಾ ಹಂದರದೊಂದಿಗೆ ಈ ನಿಗೂಢತೆಗಳ ಪಕ್ಷಿನೋಟ ನೀಡಲು ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ . ಸನ್ನಿವೇಶ, ಘಟನಾವಳಿಗಳು, ಪಾತ್ರಗಳೆಲ್ಲವೂ ನನ್ನ ಕಲ್ಪನಾ ಸೃಷ್ಟಿ. ಈ ನನ್ನ ಚೊಚ್ಚಲ ಕಾದಂಬರಿಯನ್ನು ಓದಿ ಪ್ರೋತ್ಸಾಹಿಸಿರಿ.
ಗಣೇಶ್ ಪ್ರಸಾದ್
ಮಂಜೇಶ್ವರ
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
---
ಓದುವ ಮುನ್ನ
ಜೀವನದ ಒಂದು ಘಟ್ಟದಲ್ಲಿ ಎಲ್ಲವನ್ನೂ ಒಂದೊಂದಾಗಿ ಕಳೆದುಕೊಂಡ ಕಿರಣ್ ಗೆ ಭರವಸೆಯ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತೋರಿದಾಗ ಅನಿರೀಕ್ಷಿತವಾಗಿ ನಿಗೂಢವಾದ ಬಾಗಿಲೊಂದು ತೆರೆದುಕೊಳ್ಳುತ್ತದೆ. ಅದನ್ನು ಜೀವನದ ಹೊಸ ಶಕೆಯ ಪ್ರಾರಂಭ ಎಂದುಕೊಳ್ಳುತ್ತಾನೆ ಅವನು. ಅದು ನಿಜಕ್ಕೂ ಒಂದು ಪ್ರಾರಂಭವೇ ?
ಬಯಸದೆ ಸಿಕ್ಕಿದ ಆ ಅರ್ಥೈಸಲಾಗದ ಯಂತ್ರ ಮಂತ್ರ ತಂತ್ರಗಳ ದುರ್ಗಮ ಹಾದಿಯಲ್ಲಿ ಹಲವು ವಿಸ್ಮಯಕಾರಿ ಅನುಭವಗಳಿಗೆ ದೃಕ್ ಸಾಕ್ಷಿಯಾಗುತ್ತ ಸಾಗುವ ಅವನು ಗುರಿ ಮುಟ್ಟಿದನೇ? ಮುಂದಿನ ಗುಟ್ಟನ್ನು ಸುತರಾಂ ಬಿಟ್ಟು ಕೊಡದೆ ಚಿತ್ರ ವಿಚಿತ್ರ ಅನುಭವಗಳನ್ನು ಸವಾಲಿನಂತೆ ಒಡ್ಡಿ ಹುಟ್ಟಿ ಸಾಯುತ್ತಿದ್ದ ರೋಚಕವಾದ ದಿನ ರಾತ್ರಿಗಳನ್ನು ನಿರಂತರ ಕ್ರಮಿಸಿ ಅವನು ಗಳಿಸಿದ್ದಾದರೂ ಏನು? ಕಾಣುವುದೆಲ್ಲವೂ ಸತ್ಯವಲ್ಲವೆಂಬ ಜೀವನ ಪಾಠದ ಕಹಿಯುಂಡವನಿಗೆ ಕಾಣದ ಕಡಲು ಶಾಂತಿ ಕೊಟ್ಟಿತೇ? ಕಾಣಲಾಗದ್ದನ್ನು ಕಾಣಬಲ್ಲೆನೆಂದು ಹೊರಟವನು ಕಂಡುಕೊಂಡದ್ದಾದರೂ ಏನು?
ಈ ಇ-ಪುಸ್ತಕವನ್ನು ಟೆಕ್‌ಫಿಝ್ ಸಂಸ್ಥೆಯ ಇPustaka - ink & weave ಅಭಿಯಾನದ ಅಡಿಯಲ್ಲಿ ಸೃಷ್ಟಿಸಲಾಗಿದೆ.
Reviews
There are no reviews yet.