ಭವಿಷ್ಯದ ಭೂಮಿಗಳು: ಖಗೋಳದ ಬಗ್ಗೆ ಮಾತುಕತೆ ಮತ್ತು ಹರಟೆ
Additional information
Ebook Available On: | https://play.google.com/store/books/details/_____________?id=79IhEAAAQBAJ |
---|---|
Author | ಪಾಲಹಳ್ಳಿ ಆರ್. ವಿಶ್ವನಾಥ್ |
Publisher | Techfiz Inc |
ತಾನು ಈ ಪ್ರಪಂಚದ ಕೇಂದ್ರದಲ್ಲಿ ಇದ್ದೇನೆ ಎಂಬ ಜಂಭ ಮಾನವನಿಗೆ ಹಿಂದಿನಿಂದಲೂ ಇದ್ದಿತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇಂದ್ರಿಯವಾದವನ್ನು ಪ್ರತಿಪಾದಿಸಿದ ನಂತರ ಭೂಮಿಗೆ ಹಿಂದಿನವರು ಹಾಕಿಕೊಟ್ಟಿದ್ದ ಸಿಂಹಾಸನ ಅಲ್ಲಾಡತೊಡಗಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಶ್ಯಾಪ್ಲೀ ಮತ್ತು ಹಬಲ್‌ರ ಸಂಶೋಧನೆಗಳಿಂದ ಭೂಮಿ ಒಂದು ಸಾಧಾರಣ ಗೆಲಕ್ಷಿಯ ಅಂಚಿನ ಸಾಧಾರಣ ನಕ್ಷತ್ರದ ಸಾಧಾರಣ ಗ್ರಹವೆಂಬ ಅರಿವು ಹುಟ್ಟಿತು. ಆದರೂ ಈ ಸಾಧಾರಣ ಗ್ರಹದಲ್ಲಿಯೇ ಬಾಳಿ ಬದುಕಿರುವ ಮನುಷ್ಯನಿಗೆ ಈ ಪ್ರಪಂಚದಲ್ಲಿ ನಾನು ಒಬ್ಬನೇ ಏನೆ ಎನ್ನುವ ಅನುಮಾನ ಇದ್ದೇ ಇದೆ. ಹಿಂದಿನ ಶತಮಾನದ ಅನೇಕ ಆವಿಷ್ಕಾರಗಳ ನಂತರ ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ ಗ್ರಹಗಳು ಇರಬಹುದು ಮತ್ತು ನಮ್ಮಂತೆಯೋ ಅಥವಾ ಇನ್ನು ಯಾವ ರೂಪದಲ್ಲೋ ಜನರು ಇರಬಹುದು ಎನ್ನುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಅನ್ಯಗ್ರಹ ಜೀವಿಗಳು, ಹಾರಾಡುವ ತಟ್ಟೆಗಳು ಇತ್ಯಾದಿ ವರದಿಗಳು ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ; ಅವುಗಳ ಬಗ್ಗೆ ಅನೇಕ ವೈಜ್ಞಾನಿಕ ಕಥಾ ಕಾದಂಬರಿಗಳು ರಚಿಸಲ್ಪಟ್ಟಿರುವುದಲ್ಲದೆ ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು ಹೆಚ್ಚಿಸಿವೆ. ಆದ್ದರಿಂದ ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ ಸಾಮಾನ್ಯ ಜನತೆಯನ್ನೂ ಆಸಕ್ತಿಗೊಳಿಸುತ್ತದೆ. ಈ ಪುಸ್ತಕದಲ್ಲಿ ಭೂಮಿಯ ಅತಿಶಯಗಳು, ಅದರ ಹತ್ತಿರದ ನಕ್ಷತ್ರದ ವೈಶಿಷ್ಟ್ಯ, ಸೌರಮಂಡಲದಲ್ಲೇ ವಾಸಯೋಗ್ಯವಾಗಬಹುದಾದ ಇತರ ಗ್ರಹ ಉಪಗ್ರಹಗಳು, ಅನ್ಯ ಗ್ರಹಗಳ ಜೊತೆ ಸಂಪರ್ಕದ ಸಾಧ್ಯತೆ, ಭವಿಷ್ಯದ ಭೂಮಿಗಳಿಗೆ ಹುಡುಕಾಟ, ಬಾಹ್ಯಾಕಾಶ ಪ್ರಯಾಣ ಇತ್ಯಾದಿ ವಿಷಯಗಳನ್ನು ಸರಳ ಭಾಷೆಯಲ್ಲಿ ಚರ್ಚಿಸಲಾಗಿದೆ.
--
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
Reviews
There are no reviews yet.