ePustaka – ink & weave… Get your books Self Published & Digitally Distributed

ರ ಠ ಈ ಕ….: Id, Ego, Super Ego!!!

Additional information

Ebook Available On:

https://play.google.com/store/books/details/Ravi_Hanj____?id=lk0wEAAAQBAJ

Author

Ravi Hanj

Publisher

ಸಂವಹನ ಪ್ರಕಾಶನ

ರ ಠ ಈ ಕ....

ಒಂದು ಮಗು ತನ್ನ ಪರಿಸರದ ಸುತ್ತಮುತ್ತ ನೋಡುತ್ತ ಕಂಡ ಸಂಗತಿಗಳನ್ನು ಆರಂಭದಲ್ಲಿ ಪೂರ್ವಾಗ್ರಹವಾಗಿಸಿಕೊಳ್ಳುತ್ತ ಬೆಳೆಯುತ್ತದೆ. ತಾನು ಕಾಣುವ ಸತ್ಯ ಘಟನೆಗಳು ತನಗೆ ಸಂಭವಿಸಿದರೆ... ಎಂಬ ಗಾಬರಿಯೊಂದಿಗೆ ಆರಂಭಗೊಳ್ಳುವ ಈ ಪೂರ್ವಾಗ್ರಹಗಳು ಕ್ರಮೇಣ ದೂರಾಗುತ್ತ ಸಾಗುತ್ತವೆ. ಇಂತಹ ನೋಡುತ್ತಾ, ಕೇಳುತ್ತ, ಬೆಳೆಯುತ್ತ ಗ್ರಹಿಸುವ ಗ್ರಹಿಕೆ, ದೂರಾಗಿಸುವಿಕೆ, ಮತ್ತು ಜಾಗೃತಿಗೊಳ್ಳುವ ಪ್ರಕ್ರಿಯೆಯೇ ಬಾಲ್ಯ! ವಾಸ್ತವದ ಆ ಸಂಗತಿಗಳನ್ನು ಧನಾತ್ಮಕವಾಗಿ ಸ್ವೀಕರಿಸುವ ವಾತಾವರಣ, ಪೋಷಣೆ, ಸಾಮಾಜಿಕ ವ್ಯವಸ್ಥೆ, ಪೂರಕ ಶಿಕ್ಷಣ ವ್ಯವಸ್ಥೆಗಳಿದ್ದಲ್ಲಿ ಆ ಬಾಲ್ಯ ಕಳೆವ ವ್ಯಕ್ತಿ ಸಮಾಜಮುಖಿ. ವ್ಯತ್ಯಯವುಂಟಾದಲ್ಲಿ ಅಂತರ್ಮುಖಿ, ಬಹಿರ್ಮುಖಿ, ವಿಕೃತಮುಖಿ, ಕ್ರಾಂತಿಮುಖಿ, ಮಂಗಳಮುಖಿ, ದ್ವಂದ್ವಮುಖಿ, ಬಹುಮುಖಿಗಳ ಮುಖಾಮುಖಿ!

ಸಿಗ್ಮಂಡ್ ಫ್ರಾಯ್ಡ್ ಪ್ರಚುರ ಪಡಿಸಿದ ಸುಪ್ತ, ಅಹಂ, ಮತ್ತು ಅತೀತ ಅಹಂನ ರ, ಠ, ಈ, ಕ ದಿಂದ ಶುರುವಾಗುವ ಮನಶ್ಯಾಸ್ತ್ರದ ವರ್ಣಮಾಲೆಗಳು ಕ್ರಮೇಣ ಮನಸ್ಸಿನ ಸಂಕೀರ್ಣತೆಯ ಮಜಲುಗಳಾಗಿ ಈ ಬಾಲ್ಯದಾಟದಲ್ಲಿ ಅನಾವರಣಗೊಳ್ಳುತ್ತವೆ. ಹಾಗೆಂದು ಬೆರಳು ತೋರಿ "ಇದು ಇದೇ" ಎನ್ನುವಂತೆ ನಿರ್ದೇಶಿಸಿ ತೋರಿಸದೆ ಆ ಸಂಕೀರ್ಣಗಳನ್ನು ಸುಪ್ತವಾಗಿ ಹರಿಯಲು ಬಿಟ್ಟು ಅಲ್ಲಲ್ಲಿ ಹೊಳಹುಗಳನ್ನು ತೋರಿ ಓದುಗನ ಅಹಂ ಮತ್ತು ಅತೀತ ಅಹಂಗಳಿಗೆ "ಇದು ಇದೇ" ಎಂದು ಗುರುತಿಸುವ ಕಾರ್ಯವನ್ನು ಕೊಟ್ಟಿದ್ದೇನೆ.

ನೀವು ಈ ಕೃತಿಯನ್ನು ಓದುತ್ತ ಇದರಲ್ಲಿರಬಹುದಾದ ಮನಶ್ಯಾಸ್ತ್ರದ ಸಂಕೀರ್ಣತೆಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿ, ನಿಮ್ಮಲ್ಲಿಯೂ ಇರಬಹುದಾದ ಇಂತಹ ಸಂಕೀರ್ಣತೆಗಳನ್ನು ಸ್ವಯಂ ಗುರುತಿಸಿಕೊಳ್ಳುವ ಕ್ರಿಯೆಗೆ ಪ್ರಚೋದನೆ ನೀಡುವುದು ನನ್ನ ಉದ್ದೇಶ. ಏಕೆಂದರೆ ಒಂದು ಕೃತಿ ಓದುಗರ ಜೀವನಾನುಭವಗಳೊಂದಿಗೆ ಸಮೀಕರಣಗೊಂಡು ಸ್ಪಂದನವುಂಟಾದಾಗ ಮೂಡುವ ಅಪ್ಯಾಯಮಾನತೆ ಅನನ್ಯ! ಅಂತಹ ಅಪ್ಯಾಯಮಾನ ಅನನ್ಯತೆ ನಿಮ್ಮದಾದರೆ ನಾನು ಧನ್ಯ!

ಹಾಂ, ಬಹುಪಾಲು ಕನ್ನಡಿಗರು ಕನ್ನಡ ಪಠ್ಯವನ್ನು ಅ ಆ ಇ ಈ ವರ್ಣಮಾಲೆಯಿಂದ ಕಲಿತಿದ್ದರೆ ನನ್ನಂತಹ ಮಧ್ಯ ಕರ್ನಾಟಕದಿಂದ ಆರಂಭಗೊಂಡು ಉತ್ತರದ ಗಡಿಯವರೆಗಿನ ಕನ್ನಡಿಗರು ರ ಠ ಈ ಕ ವರ್ಣಮಾಲೆಯಿಂದ ಕನ್ನಡವನ್ನು ಕಲಿತಿರುತ್ತೇವೆ. ನನ್ನ ಕನ್ನಡ ಭಾಷೆಯನ್ನಲ್ಲದೆ, ಜೀವನವನ್ನೇ ವರ್ಣಮಯಗೊಳಿಸಿದ, ಉಚ್ಚಾರಣೆಯಲ್ಲದೆ ನಿಲುವನ್ನು ಗಟ್ಟಿಗೊಳಿಸಿದ, ಸ್ಪಷ್ಟ ಅಭಿವ್ಯಕ್ತಿತ್ವಕ್ಕೆ ಬುನಾದಿಯೊದಗಿಸಿದ ರ ಠ ಈ ಕ ವರ್ಣಮಾಲೆ ನನ್ನ ಪುಸ್ತಕದ ಶೀರ್ಷಿಕೆಯಾಗಿದೆಯಷ್ಟೆ.

- ರವಿ ಹಂಜ್

“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”

Reviews

There are no reviews yet.

Be the first to review “ರ ಠ ಈ ಕ….: Id, Ego, Super Ego!!!”

Your email address will not be published. Required fields are marked *