ePustaka – ink & weave… Get your books Self Published & Digitally Distributed

‍ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು

Category:

Additional information

Ebook Available On:

https://play.google.com/store/books/details/_________?id=ji84EAAAQBAJ

Author

ಡಾ. ಕಿರಣ್ ವಿ. ಎಸ್

Publisher

Techfiz Inc

“ಸೆರೆಂಡಿಪಿಟಿ”ಯ ಮುನ್ನೋಟ: ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ
ಅರಸುತ್ತಿದ್ದ ಬಳ್ಳಿ ಬಂದು ಕಾಲಿಗೆ ತೊಡರಿತು ಅಂತೊಂದು ಗಾದೆ ಮಾತಿದೆ. ಯಾವುದೋ ವಸ್ತುವನ್ನು ಹುಡುಕುವುದಕ್ಕಾಗಿ ಎಲ್ಲಿಲ್ಲದ ಶ್ರಮ ಸಮಯ ವ್ಯಯಿಸಲು ತಯಾರಿರುತ್ತೇವೆ, ಆದರೆ ಅದೃಷ್ಟವಶಾತ್ ಆ ವಸ್ತು ತುಂಬ ಸುಲಭವಾಗಿಯೇ ಸಿಕ್ಕಿಬಿಡುತ್ತದೆ. ಅಂಥ ಸನ್ನಿವೇಶದ ಬಣ್ಣನೆಗೆ ಈ ಗಾದೆಯನ್ನು ಬಳಸುತ್ತೇವೆ. ಮತ್ತೆ ಕೆಲವೊಮ್ಮೆ ಹೀಗೂ ಆಗುವುದಿದೆ- ಯಾವುದೋ ವಸ್ತುವನ್ನು ಹುಡುಕುವುದಕ್ಕಾಗಿ ಎಲ್ಲಿಲ್ಲದ ಶ್ರಮ ಸಮಯ ವ್ಯಯಿಸಿರುತ್ತೇವೆ, ಆ ವಸ್ತುವಂತೂ ಇನ್ನೂ ಸಿಕ್ಕಿರುವುದಿಲ್ಲ, ಆದರೆ ಬೇರೆಯೇ ಒಂದು ವಸ್ತು ಬಳ್ಳಿಯಂತೆ ಬಂದು ಕಾಲಿಗೆ ತೊಡರಿಕೊಳ್ಳುತ್ತದೆ. ಬಳ್ಳಿಯೆಂದರೆ ಸಾಮಾನ್ಯ ಬಳ್ಳಿ ಅಲ್ಲ, ಅಮೃತಬಳ್ಳಿ! ಅದು ಸಿಕ್ಕ ಸಂಭ್ರಮ ಎಷ್ಟಿರುತ್ತದೆಂದರೆ ಅಸಲಿ ಹುಡುಕಾಟವನ್ನು ನಾವು ಕೈಬಿಟ್ಟುಬಿಡುವುದೂ ಇದೆ! ಒಂದು ಒಳ್ಳೆಯ ಉದಾಹರಣೆ ಕೊಡುವುದಾದರೆ- ಪ್ರಾಣಿಗಳ ಬೇಟೆಗೆಂದು ಕಾಡಿಗೆ ಹೋಗಿದ್ದ ದುಷ್ಯಂತ ಮಹಾರಾಜನಿಗೆ ಕಣ್ವಮಹರ್ಷಿಯ ಆಶ್ರಮದ ಬಳಿಯಲ್ಲಿ ಚೆಲುವೆ ಶಕುಂತಲೆ ಭೇಟಿಯಾದದ್ದು. ಇಂಥ ಸನ್ನಿವೇಶದ ಬಣ್ಣನೆಗೆ ನನಗೆ ಗೊತ್ತಿದ್ದಂತೆ ಕನ್ನಡದಲ್ಲಿ ಗಾದೆ ಮಾತಿಲ್ಲ. ಆದರೆ ಇಂಗ್ಲಿಷ್ ಭಾಷೆಯಲ್ಲೊಂದು ಶಕುಂತಲೆಯಷ್ಟೇ ಅತಿ ಸುಂದರವಾದ ಪದ ಇದೆ, ಅದೇ Serendipity ಎಂಬ ಪದ. ಸೆರೆಂಡಿಪಿಟಿ ಎಂದು ಉಚ್ಚಾರ. ನಿಘಂಟು ತೆರೆದು ನೋಡಿದರೆ the occurrence and development of events by chance in a happy or beneficial way ಎಂಬ ಅರ್ಥ.

This book has been produced by Techfiz Inc., Bengaluru - under Ink & View initiative - contact us at https://techfiz.com

Reviews

There are no reviews yet.

Be the first to review “‍ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು”

Your email address will not be published. Required fields are marked *